ರೊಮೇನಿಯ
ಯುರೋಪಿನ ಒಂದು ಸರ್ವತಂತ್ರ ಸ್ವತಂತ್ರಗಣರಾಜ್ಯ. ಈ ದೇಶವನ್ನು ಪೂರ್ವದಲ್ಲಿ ಸು. 209 ಕಿಮೀ ತೀರದ ಕಪ್ಪುಸಮುದ್ರ, ಉತ್ತರ ಮತ್ತು ಈಶಾನ್ಯದಲ್ಲಿ ರಷ್ಯದ ಉಕ್ರೇನ್ ಮತ್ತು ಮಾಲ್ಟೋವಗಳ ಸು. 1320 ಕಿಮೀ ಉದ್ದದ ಗಡಿಪ್ರದೇಶ, ದಕ್ಷಿಣದಲ್ಲಿ ಬಲ್ಗೇರಿಯದ ಸು. 608 ಕಿಮೀ ಗಡಿಪ್ರದೇಶ ಮತ್ತು ಪಶ್ಚಿಮದಲ್ಲಿ ಯೂಗೋಸ್ಲಾವಿಯದ ಸು. 542 ಕಿಮೀ, ಹಂಗರಿಯ 443 ಕಿಮೀ ಉದ್ದದ ಗಡಿಪ್ರದೇಶಗಳು ಸುತ್ತುವರಿದಿವೆ. ಯುರೋಪಿನ ದಕ್ಷಿಣ ಮತ್ತು ಆಗ್ನೇಯ ಭಾಗದಲ್ಲಿರುವ ಇದರ ಒಟ್ಟು ವಿಸ್ತೀರ್ಣ 2,38,391 ಚ.ಕಿಮೀ. ಇದು ಉತ್ತರ ಅಕ್ಷಾಂಶ 430-370 ದಿಂದ 480-160ವರೆಗೆ 200-160 ದಿಂದ 290-430 ಪೂರ್ವ ರೇಖಾಂಶದವರೆಗೆ ಹರಡಿದೆ. ಪೂರ್ವಪಶ್ಚಿಮವಾಗಿ 724 ಕಿಮೀ ಮತ್ತು ದಕ್ಷಿಣೋತ್ತರವಾಗಿ 515 ಕಿಮೀ ಇರುವ ಈ ದೇಶ 7,160 ಚ.ಕಿಮೀ ಜಲಭಾಗವನ್ನು ಹೊಂದಿದೆ. ರಾಜಧಾನಿ ಬುಕಾರೆಸ್ಟ್. ದೇಶದ ಒಟ್ಟು ಜನಸಂಖ್ಯೆ 22,271,839(2003). ಪ್ರತಿ ಚ.ಕಿಮೀಗೆ ಸೇ. 98.2 ಜನಸಾಂದ್ರತೆ ಕಂಡುಬರುತ್ತದೆ. 

ಭೂ ಸ್ವರೂಪ: ಕಾರ್ಪೇಥಿüಯನ್ ಪರ್ವತ ರೊಮೇನಿಯದ ಬೆನ್ನೆಲುಬಾಗಿದ್ದು, ದೇಶದಲ್ಲಿ ಆಗ್ನೇಯದಿಂದ ಪಶ್ಚಿಮದ ಕಡೆಗೆ ಹರಡಿದೆ. ಇದು ದಕ್ಷಿಣದಲ್ಲಿ ಅರ್ಧ ಚಂದ್ರಾಕೃತಿಯಲ್ಲಿದ್ದು ಟ್ರಾನ್ಸಿಲ್ವೇನಿಯನ್ ಆಲ್ಫ್ಸ್‍ನ ಶಾಖೆಯಾಗಿದೆ. ಇಲ್ಲಿನ ಪರ್ವತಗಳು ಹೆಚ್ಚು ಎತ್ತರವಾಗಿ ಕಡಿದಾಗಿ ಇಲ್ಲ. ಇದರಿಂದ ದೇಶದಲ್ಲಿನ ಸಂಚಾರ ಮಾರ್ಗಕ್ಕೆ ಧಕ್ಕೆ ಉಂಟಾಗಿಲ್ಲ. ಇಲ್ಲಿನ ಅತಿ ಎತ್ತರದ ಮಾಲ್ಡೆವೀನು ಪರ್ವತ, 2543 ಮೀ. ಕಾರ್ಪೇಥಿಯನ್ ಕೆಳವಲಯದಲ್ಲಿ ಪ್ರಸ್ಥಭೂಮಿ ಮತ್ತು ಮೈದಾನಗಳಿವೆ. ಕಪ್ಪುಸಮುದ್ರ ಹೆಚ್ಚು ಆಳಪ್ರದೇಶವಾಗಿದೆ. ವಾಲೇಕಿಯನ್ ಮತ್ತು ಮಾಲ್ಡವೀಯ ಮೈದಾನಗಳು ವಿಸ್ತಾರವಾಗಿದ್ದು ಪೆಬ್ಬಲ್ಸ್ ಮತ್ತು ಜೇಡಿ ಮಣ್ಣಿನಿಂದ ಕೂಡಿವೆ. ಪೂರ್ವದಲ್ಲಿ ಸೆಂಟ, ಪ್ರೂಟ್ ನದಿಗಳು, ದಕ್ಷಿಣದಲ್ಲಿ ಡಾನ್ಯೂಬ್, ಅಲ್ಟ್ ನದಿಗಳು ಟ್ರಾನ್ಸಿಲ್ವೇನಿಯದಲ್ಲಿ ವಿಶಾಲವಾಗಿ, ಆಳವಾಗಿ ಹರಿಯುವುವು. ಮುರೀಸ್ ಇತರ ನದಿ ಶಾಖೆಗಳನ್ನು ಒಳಗೊಂಡಿದೆ. ಕೆಳ ಡಾನ್ಯೂಬ್ ಮತ್ತು ಕಪ್ಪು ಸಮುದ್ರಗಳ ನಡುವೆ ಡೊಬ್ರಜû ನದಿ ಪ್ರಸ್ಥಭೂಮಿ ಪ್ರಮುಖ ವಾಗಿದ್ದು, ಅನೇಕ ಕಂದರಗಳನ್ನು ಒಳಗೊಂಡಿದೆ. ಅಲ್ಲದೆ ಕಿಲಿಯ, ಸುಲೀನ, ಸೆಂಟ್‍ಜಾರ್ಜ್ ತೀರಗಳು ಪ್ರಮುಖವಾದವು. 

ಸ್ವಾಭಾವಿಕ ಸಸ್ಯವರ್ಗ: ದಕ್ಷಿಣ ರೊಮೇನಿಯದ ಮಾಲ್ಟೋವ ಮತ್ತು ವಾಲಾಂಚಿಯನ್ ಕೆಳಪ್ರದೇಶದಲ್ಲಿ ಸ್ಟೆಪ್ಪೀಸ್ ಮಾದರಿಯ ಹುಲ್ಲು ಗಾವಲಿದ್ದು, ಒಣ ಪ್ರದೇಶಗಳಲ್ಲಿ ಹುಲ್ಲು ಪ್ರದೇಶ ಕಂಡು ಬರುತ್ತದೆ. ಕಾರ್ಪೇಥಿüಯನ್ ಬೆಟ್ಟ ಪ್ರದೇಶಗಳ ಅರಣ್ಯಗಳಲ್ಲಿ ಕೋನಿಫೆರಸ್ ಅರಣ್ಯ ಕಂಡುಬರುತ್ತದೆ.

ಪ್ರಾಣಿ ಸಂಪತ್ತು: ಇಲ್ಲಿ ಕಂದು ಕರಡಿ, ತೋಳ, ನರಿ, ಹೇಸರಗತ್ತೆ (ಜೀಬ್ರಾ) ಕಂಡುಬರುತ್ತವೆ. 

ರಾಜ್ಯ ಮತ್ತು ಭಾಷೆ: ರೊಮೇನಿಯವನ್ನು 41 ಕೌಂಟಿ (ಜಡ್ಜಟ್)ಗಳಾಗಿ ವಿಂಗಡಿಸಲಾಗಿದೆ. ಇಲ್ಲಿಯ ಪ್ರಮುಖ ನಗರಗಳು ಮತ್ತು ಜನಸಂಖ್ಯೆ ಹೀಗಿವೆ.

	  ನಗರ	ಜನಸಂಖ್ಯೆ	    ನಗರ	ಜನಸಂಖ್ಯೆ
	ಬುಕಾರೆಸ್ಟ್	20,27,512	ಕ್ಲುಚ್-ನಪೋರಾ	3,32,792
	ಲಾಸಿ	3,48.399	ಗಲಾಬಿ	3,31,360
	ಕಾನ್‍ಸ್ಟಂಟ್	3,44,876	ಬ್ರೊಸೆವ್	3,17,772
	ಟಿಮೋಸೋರ್	3,34,098	ಕ್ರೊಯ್‍ಬಾ	3,12,891
	ಪ್ಲಾಯೀಸ್ಟಿ	2,53,414

ರೊಮೇನಿಯದಲ್ಲಿ ಸೇ.85-90 ಜನ ಲ್ಯಾಟಿನ್ ಭಾಷೆಯನ್ನು ಬಳಸುತ್ತಾರೆ. ರೊಮೇನಿಯನ್ ಆಡಳಿತ ಭಾಷೆಯಾಗಿದ್ದು, ಹಂಗರಿಯನ್, ಜರ್ಮನ್, ಗ್ರೀಕ್, ಟರೇಷಿ ಭಾಷೆಗಳೂ ಕಂಡುಬರುತ್ತವೆ. ಬುಕಾರೆಸ್ಟನ್ನು “ಬಾಲ್ಕನ್ ಪ್ರದೇಶದ ಪ್ಯಾರಿಸ್” ಎನ್ನುತ್ತಾರೆ.

ಜನವರ್ಗ: ಸೇ. 83ರಷ್ಟು ಇರುವ ರೊಮೇನಿಯನ್ ಸಾಂಪ್ರದಾಯಿಕ ಕ್ರಿಸ್ತ ಜನಸಮೂಹ ಇಲ್ಲಿ ಮುಖ್ಯವಾದ್ದು. ಹಂಗರಿಯನ್ ಸೇ. 6.6, ರೋಮನ್ 2.5, ಯುಕ್ರೇಸಿಯನ್ 0.3, ಜರ್ಮನ್ 0.3, ರಷ್ಯನ್ 0.2, ಟರ್ಕಿಷ್ 0.2 (2002), ಅಲೆಮಾರಿ ಜಿಪ್ಸಿ ಅಲ್ಲದೆ ಇತರರೂ ಇದ್ದಾರೆ. ರೊಮೇನಿಯನರು ಡಾಸಿ ಪಂಗಡದ ಮೂಲದವರು.
ಧರ್ಮ: ರೊಮೇನಿಯದಲ್ಲಿ 15ಕ್ಕಿಂತ ಹೆಚ್ಚು ಧರ್ಮಗಳಿವೆ. 400ಕ್ಕೂ ಹೆಚ್ಚು ಜಾತಿ ವೈವಿಧ್ಯವಿದೆ. ಪೂರ್ವ ಆರ್ಥೊಡಕ್ಸ್ (ಎಲ್ಲ ಉಪಧರ್ಮಗಳನ್ನು ಒಳಗೊಂಡು) ಸೇ. 87 ಕಂಡುಬಂದರೆ, ಪ್ರಾಟಸ್ಟೆಂಟರು ಸೇ. 6.8, ಕೆರ್ಥೊಲಿಕರು ಸೇ. 5.6, ಇತರೆ (ಮುಸ್ಲಿಂ) ಸೇ. 0.4 ಕಂಡುಬರುತ್ತಾರೆ. 

ಶಿಕ್ಷಣ: ಒಟ್ಟು ಜನಸಂಖ್ಯೆಯ 98.4ರಷ್ಟು ವಿದ್ಯಾವಂತರಿದ್ದಾರೆ. ಇದರಲ್ಲಿ ಗಂಡಸರು ಸೇ. 99.1, ಹೆಂಗಸರು 97.7(2003). ಲೈಸೀ ಎಂಬ ಉದ್ಯೋಗಾಧಾರಿತ ಶಿಕ್ಷಣ ಮತ್ತು ಆಧುನಿಕ ತಾಂತ್ರಿಕ ವಿದ್ಯಾಭ್ಯಾಸ ಕಂಡುಬರುತ್ತದೆ.

ವಾಯುಗುಣ: ರೊಮೇನಿಯ ಸಾಧಾರಣ ಅರ್ಧಖಂಡಾಂತರ ಮಾದರಿಯ ವಾಯುಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಉತ್ತರದಿಂದ ಬೀಸುವ ಶೀತಗಾಳಿಯಿಂದ ಹೆಚ್ಚಾದ ಶೀತವಾಯುಗುಣವಿದ್ದರೆ, ಬೇಸಗೆಯಲ್ಲಿ ಸಾಗರದ ಪಶ್ಚಿಮ ಮಾರುತಗಳು ಉಷ್ಣತೆಯನ್ನುಂಟು ಮಾಡುತ್ತವೆ. ಜನವರಿಯಲ್ಲಿ ಅಟ್ಲಾಂಟಿಕ್‍ನ ಸರಾಸರಿ ಉಷ್ಣಾಂಶ 250-320 ಸೆಂ.ಗ್ರೇ. ಬೇಸಗೆಯಲ್ಲಿ ಗರಿಷ್ಠ ಉಷ್ಣಾಂಶ ಡಾನ್ಯೂಬ್ ಕಣಿವೆಯಲ್ಲಿಯೂ (950ಈ) ಈಶಾನ್ಯದ ಉತ್ತರದ ಪ್ರದೇಶದಲ್ಲಿ ಕಡಮೆ ಉಷ್ಣಾಂಶವೂ ಕಂಡುಬರುತ್ತದೆ. ಕಪ್ಪುಸಮುದ್ರದ ತೀರಪ್ರದೇಶದಲ್ಲಿ ಸಾಧಾರಣ ಉಷ್ಣಾಂಶವಿದ್ದು ತಂಪಾಗಿರುತ್ತದೆ. ವಾರ್ಷಿಕ ಸರಾಸರಿ ಮಳೆ 50-100 ಸೆಂಮೀ.

ಆರ್ಥಿಕತೆ: ಇದು ಕೈಗಾರಿಕಾ ಪ್ರಧಾನ ದೇಶವಾದರೂ ವ್ಯವಸಾಯ, ಗಣಗಾರಿಕೆ, ಮತ್ಸ್ಯೋದ್ಯಮ, ಅರಣ್ಯ ಸಂಪತ್ತು ಕಂಡು ಬರುತ್ತದೆ. ಸೇ. 44.5 ಕ್ಕಿಂತ ಹೆಚ್ಚು ಜನ ಬಡತನ ರೇಖೆಯ ಕೆಳಗೆ ಇದ್ದಾರೆ.

ವ್ಯವಸಾಯ: ಸೇ. 30 ಜನ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಒಟ್ಟು 28,800 ಚ.ಕಿಮೀ(1998) ಪ್ರದೇಶದಲ್ಲಿ ವ್ಯವಸಾಯ ಕಂಡುಬರುತ್ತದೆ. ಒಟ್ಟು ಭೂಮಿಯಲ್ಲಿ ಸೇ. 40.57 ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಮಾಲೊವಿಯ, ವಾಲೇಕಿಯ, ಡೊಬ್ರಜûಗಳಲ್ಲಿ ವ್ಯವಸಾಯ ಕೇಂದ್ರೀಕೃತಗೊಂಡಿದ್ದು, 30,89,000 ಹೆಕ್ಟೇರ್ ಪ್ರದೇಶ ನೀರಾವರಿ ಹೊಂದಿದೆ. 9.3ದಶಲಕ್ಷ ಹೆಕ್ಟೇರ್ ಒಣ ಭೂಮಿಯಿದ್ದು 2.53 ಮಿಲಿಯನ್ ಹೆಕ್ಟೇರ್ ಪ್ರದೇಶ ಖಾಸಗಿ ಒಡೆತನದಲ್ಲಿದೆ. ಗೋದಿ, ಬಾರ್ಲಿ, ಜೋಳ, ರೇ, ಓಟ್ಸ್, ಬತ್ತ ಮುಖ್ಯ ಬೆಳೆಗಳು. ಆಲೂಗೆಡ್ಡೆ, ಬೀನ್ಸ್, ಬಟಾಣಿ, ಸೋಯಾಬೀನ್, ತರಕಾರಿ ಮತ್ತು ಹಣ್ಣುಗಳನ್ನೂ ಬೆಳೆಯುತ್ತಾರೆ. 

ಕುದುರೆ, ಹಂದಿ, ಕುರಿ, ಮೇಕೆ, ಕೋಳಿ ಮುಂತಾದವುಗಳ ಸಾಕಣೆ ಯುಂಟು.

ಮೀನುಗಾರಿಕೆ: ಇಲ್ಲಿನ ಕೆರೆ ಮತ್ತು ಡಾನ್ಯೂಬ್ ನದಿ ಪ್ರದೇಶಗಳಲ್ಲಿ ಒಳನಾಡಿನ ಮೀನುಗಾರಿಕೆ ಇದೆ. ತೀರಪ್ರದೇಶದಲ್ಲಿ ಮೀನುಗಾರಿಕೆಯಿದ್ದು ವಾರ್ಷಿಕ 2,16,938 ಟನ್ ಮೀನು ಹಿಡಿಯಲಾಗುತ್ತದೆ. 

ಅರಣ್ಯಸಂಪತ್ತು: ದೇಶದ ಒಟ್ಟು ಭೂಪ್ರದೇಶದಲ್ಲಿ ಸೇ. 27.1ರಷ್ಟು ಅರಣ್ಯವಿದ್ದು, ಕಾರ್ಪೇಥಿಯನ್ ಮತ್ತು ಟ್ರಾನ್ಸಿಲ್ವೇನಿಯದ ಅರಣ್ಯಪ್ರದೇಶ ಮುಖ್ಯವಾಗಿವೆ. ಇವು ದೇಶದ 5ನೆಯ ಮುಖ್ಯ ಅರಣ್ಯೋತ್ಪನ್ನಗಳ ತಾಣಗಳಾಗಿದ್ದು ಸೇ. 9.3ರಷ್ಟು ಆದಾಯ ತರುತ್ತಿವೆ. 

ಗಣಿಗಾರಿಕೆ: ಪೆಟ್ರೋಲಿಯಂ ಉತ್ಪನ್ನದಲ್ಲಿ ಈ ದೇಶ ಯುರೋಪ್‍ನಲ್ಲಿ 2ನೆಯ ಸ್ಥಾನದಲ್ಲಿದ್ದು ಪ್ರಕವ ಜಿಲ್ಲೆ ಬೃಹತ್ ಪೆಟ್ರೋಲಿಯಂ ನಿಕ್ಷೇಪವನ್ನು ಹೊಂದಿದೆ. ಅಲ್ಲದೆ ಕಲ್ಲಿದ್ದಲು, ಲಿಗ್ನೈಟ್, ಕಬ್ಬಿಣದ ಅದಿರು, ಬಾಕ್ಸೈಟ್, ಲೆಡ್, ಜಿಂಕ್, ಉಪ್ಪು ಮತ್ತು ಸ್ವಾಭಾವಿಕ ಅನಿಲ ನಿಕ್ಷೇಪಗಳಿವೆ. ವಿದ್ಯುತ್ ಉತ್ಪಾದನೆ ವಾರ್ಷಿಕವಾಗಿ 50.86 ಮಿಲಿಯನ್ ಕಿವ್ಯಾ(1999).
ಕೈಗಾರಿಕೆ: ಇಲ್ಲಿ 33,824 ಕೈಗಾರಿಕಾ ಸಂಸ್ಥೆಗಳಿದ್ದು, 2,182 ಸರ್ಕಾರದ ಅಧೀನದಲ್ಲಿದ್ದರೆ 1,374 ಸ್ಥಳೀಯ ಸರ್ಕಾರದ ಆಡಳಿತದಲ್ಲಿವೆ. ಉಳಿದವು ಖಾಸಗಿ ಸಂಘ ಸಂಸ್ಥೆಗಳ ಒಡೆತನದಲ್ಲಿವೆ.

ವ್ಯಾಪಾರ: ಜವಳಿ, ಖನಿಜೋತ್ಪನ್ನ, ರಾಸಾಯನಿಕ ವಸ್ತುಗಳು  ಪ್ರಮುಖ ರಫ್ತಿನ ವಸ್ತುಗಳಾಗಿದ್ದು ಫ್ರಾನ್ಸ್, ಟರ್ಕಿ, ಅಮೆರಿಕ ಮೊದಲಾದ ದೇಶಗಳಿಗೆ ರಫ್ತಾಗುತ್ತವೆ. ಇಟಲಿ, ರಷ್ಯ, ಫ್ರಾನ್ಸ್, ದಕ್ಷಿಣ ಕೊರಿಯ ಮೊದಲಾ ದೆಡೆಗಳಿಂದ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. 

ಸಾರಿಗೆ ವ್ಯವಸ್ಥೆ: ರೈಲು ಸಾರಿಗೆ ಪ್ರಮುಖವಾಗಿದ್ದು 11,385 ಕಿಮೀ ರೈಲು ಮಾರ್ಗವನ್ನೂ 3,888 ಕಿಮೀ ವಿದ್ಯುತ್‍ಚಾಲಿತ ರೈಲುಮಾರ್ಗವನ್ನೂ ಹೊಂದಿದೆ. ಸ್ಟಾಂಡರ್ಡ್‍ಗೇಜ್ 10,898 ಕಿಮೀ, ನ್ಯಾರೋಗೇಜ್ 427 ಕಿಮೀ, ಬ್ರಾಡ್‍ಗೇಜ್ 60ಕಿಮೀ ನಷ್ಟಿವೆ. ರಸ್ತೆಗಳ ಒಟ್ಟು ಉದ್ದ 1,53,359 ಕಿಮೀ. ಜಲಮಾರ್ಗ 1,724 ಕಿಮೀ ಇದೆ. ಗಲಾಬಿ, ಬ್ರಾಯಲಾ, ಗೈರ್‍ಗ್ಯೂ ಪ್ರಮುಖ ಬಂದರುಗಳು. ವಿಮಾನಯಾನವೂ ಇದ್ದು, ಬುಕಾರೆಸ್ಟ್ ಪ್ರಮುಖ ವಿಮಾನ ನಿಲ್ದಾಣ. ಇದು ಚೆಕೊಸ್ಲೊವಾಕಿಯ, ರಷ್ಯ, ಹಂಗರಿ, ಪಶ್ಚಿಮ ಜರ್ಮನಿಗಳೊಡನೆ ಸಂಪರ್ಕ ಕಲ್ಪಿಸುತ್ತದೆ.
ಇತಿಹಾಸ: ರೊಮೇನಿಯನ್ನರು ತ್ರಿಷಿಯನ್ ಬುಡಕಟ್ಟಿನ ಡಾಸಿಯನ್ ಪಂಗಡಕ್ಕೆ ಸೇರಿದವರು. ಇವರು ರೋಮನ್ ಕಾಲೊನಿಗಳಿಂದ ಬಾಲ್ಕನ್ ಪರ್ಯಾಯದ್ವೀಪದ ಮುಖಾಂತರ ಮಧ್ಯಕಾಲದಲ್ಲಿ ಈ ಪ್ರದೇಶಕ್ಕೆ ಬಂದು ನೆಲೆಸಿರಬಹುದು ಎನ್ನಲಾಗಿದೆ. ದೇಶದ ಒಟ್ಟು ಜನರಲ್ಲಿ 85 ಭಾಗ ಹಿಂದಿನ ರೊಮೇನಿಯನ್ನರ ವಂಶಸ್ಥರಿದ್ದಾರೆ. ಇಲ್ಲಿನ ಜನ ರೋಮನ್, ಗೋಥ್, ಹೂಣ ಮತ್ತು ಸ್ಲಾವ್ ಪಂಗಡಗಳಿಗೆ ಸೇರಿದವರಾಗಿದ್ದಾರೆ. 19ನೆಯ ಶತಮಾನಕ್ಕೆ ಮೊದಲು ಟರ್ಕರ ಆಳಿಕೆಗೆ ಒಳಪಟ್ಟು ಅನಂತರ ರಷ್ಯನ್ನರ ಅಧೀನದಲ್ಲಿದ್ದು, 1859ರ ಕ್ರಿಮಿಯ ಯುದ್ಧ ಮತ್ತು 1878ರ ಬರ್ಲಿನ್ ಒಪ್ಪಂದದ ಅನಂತರ ತನ್ನ ಪ್ರದೇಶವಾದ ಬೆಸರ್ಬಿಯವನ್ನು ರಷ್ಯಕ್ಕೆ ಕೊಟ್ಟು, ಡೊಬ್ರಜ ಪ್ರದೇಶವನ್ನು ಪಡೆದು, 1881ರಲ್ಲಿ ರಾಜರ ಆಳಿಕೆಗೆ ಒಳಪಟ್ಟಿತು. 1991ರಲ್ಲಿ ಪ್ರಜಾಪ್ರಭುತ್ವ ಸರ್ವಸ್ವತಂತ್ರ ಸರ್ಕಾರ ರಚಿತವಾಯಿತು. ರಾಷ್ಟ್ರಪತಿ ದೇಶದ ಮುಖ್ಯಸ್ಥ. ಈ ಅಧಿಕಾರದ ಅವಧಿ 4 ವರ್ಷ. 343 ಸದಸ್ಯರ ಸೆನೆಟ್ ಇದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ (2000 ನವೆಂಬರ್ 26) ಲಾನ್‍ಲಿಸ್ಕು ರಾಷ್ಟ್ರಾಧ್ಯಕ್ಷನಾದ. ಡೆಮಾಕ್ರಟಿಕ್ ಸೋಶಿಯಲ್ ಪೊಲೆ ಆಫ್ ರೊಮೇನಿಯ ಪಕ್ಷ ಜಯಶೀಲವಾಯಿತು.	
(ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ